ಬಿಗ್ ಶಾಕ್ : ಐಶ್ವರ್ಯಾ ರೈ ನನ್ನಮ್ಮ ಅಂತ ಹೇಳ್ತಿದ್ದಾನೆ ಈ 29 ವರ್ಷದ ಸಂಗೀತ್ ಕುಮಾರ್ ರೈ | Filmibeat Kannada

2017-12-30 8,447

''ನಾನು ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ''.....ಈ ಸುದ್ದಿ ಕೇಳಿ ಒಂದು ಕ್ಷಣ ನಮಗೂ ಅಚ್ಚರಿ ಆಯ್ತು. ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಮದುವೆ 10 ವರ್ಷ ಆಗಿದೆ. ಇವರಿಬ್ಬರಿಗೆ ಒ��ದು ಮುದ್ದಾದ ಹೆಣ್ಣು ಮಗಳಿದ್ದಾಳೆ. ಆ ಮಗು ಹೆಸರು ಆರಾಧ್ಯ. ಹೀಗಿರುವಾಗ, ಮಗ ಎಲ್ಲಿಂದ ಬಂದ ಎಂಬ ಕುತೂಹಲ ಶುರುವಾಯ್ತು. ಆದ್ರೆ, ಇಲ್ಲೊಬ್ಬ ಯುವಕ ''ನಾನು ವಿಶ್ವ ಸುಂದರಿ, ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಮಂಗಳೂರಿನಲ್ಲಿ ಸಂಚಲನ ಮೂಡಿಸಿದ್ದಾನೆ. ಹೌದು, ಆಂದ್ರದ ವಿಶಾಖಪಟ್ಟಣಂ ಮೂಲದ 29 ವರ್ಷದ ಯುವಕ ತಾನು ವಿಶ್ವ ಸುಂದರಿಯಾಗಿದ್ದ ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಅವರ ಮಗನೆಂದು ಹೇಳಿಕೊಂಡು ಹೊಸ ಬಾಂಬ್ ಸಿಡಿಸಿದ್ದಾನೆ.